Skip to main content

Posts

Featured

ಸಿಹಿಜೋಳ ಮತ್ತು……!

  ಇವತ್ತು ಕೆಲಸದಿಂದ ಬರ್ತಾ ಅಮ್ಮಂಗೆ ಅಂತ ಸ್ವೀಟ್ ಕಾರ್ನ್ ತಗೊಂಡ್ ಹೋಗೋಣ ಅಂತ ಒಂದ್ ಕಡೆ ನಿಲ್ಸ್ದೆ. ಪ್ರತಿಸರ್ತಿಗಿಂತ ಈ ಬಾರಿ ಬೇರೆ ಹುಡುಗ ಇದ್ದ. ಹಿಂದೆ ಅವನ ಅಣ್ಣ ನಿಂತಿದ್ದ. ನಾ ಹೇಳಿದ್ದು ಕಟ್ಟಿ ಕೊಟ್ಟ. ಜೋಳ ಬೇಯಿಸುವ ಸ್ಟೀಮರ್ ಖಾಲಿ ಆಯಿತು. ನಂತರ ದುಡ್ಡು ಕೊಟ್ಟೆ. ಅವನು ಅದನ್ನ ಕೈಯ್ಯಿಂದ ಇಸ್ಕೊಳ್ಳದೆ ನನ್ನ ಕೈಯ್ಯಾರೆ ಸ್ಟೀಮರ್ ಮುಚ್ಚಳದ ಮೇಲೆ ಇಡಲು ಹೇಳಿದ. ನಂತರ ಅದನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು ಅವನ ಕಾರ್ಟ್ನಲ್ಲಿದ್ದ ದೇವರ ಫೋಟೋಗಳಿಗೆ ಮುಟ್ಟಿಸಿ ಕೈ ಮುಗಿದು ಪುಟ್ಟ ತಿಜೋರಿಯಲ್ಲಿ ಇಟ್ಟ. ಅದರ ಮೇಲೆ ಯಾಕೆ ಇಡಲು ಕೇಳಿದೆ ಎಂದಾಗ ಅವ ಹೇಳಿದ್ದು ನನ್ನದೇ ಕಡೆಯ ವ್ಯಾಪಾರ (ಈ ದಿನಕ್ಕೆ ).ಅದಕ್ಕೆ, ಅವನು ನನ್ನ ಕೈಯಲ್ಲೇ ಅದರ ಮೇಲೆ ಇಡಿಸುತ್ತ ಇನ್ಡೈರೆಕ್ಟ್ ಆಗಿ ನನಗೆ ಕೃತಜ್ಞತೆ ಸಲ್ಲಿಸುತ್ತಾ ವ್ಯಾಪಾರ ಚೆನ್ನಾಗಿ ಆಗಿದ್ದಕ್ಕೆ ಆ ದೇವರಿಗೆ ಧನ್ಯವಾದ ಹೇಳಿದ ರೀತಿ ಒಂತರಹ ಖುಷಿ ಕೊಡ್ತು . ಬೋಣಿ ಬಗ್ಗೆ ತಿಳಿದಿತ್ತು ಆದ್ರೆ ಇದು ಒಂತರಹ ಹೊಸ ಅನುಭವ ಅಥವಾ ಇಲ್ಲಿವರೆಗೆ ಅಷ್ಟಾಗಿ ಗಮನಿಸಿರಲಿಲ್ವೇನೋ..! ಆ ಒಂದು ಮುಗ್ದತೆ ನಾವ್ ಯಾಕ್ ಕಳ್ಕೊಂಡ್ವೋ ಅನ್ಸ್ತು…!

Latest posts